ದತ್ತಾಂಶ ಮಾಹಿತಿ ಬಳಕೆಗೆ ಬಗ್ಗೆ
ಐ.ಟಿ.ಎಸ್/ವಿ.ಟಿ.ಎಂ.ಎಸ್ ವ್ಯವಸ್ಥೆಯಲ್ಲಿ ಲಭ್ಯವಾಗುವ ಮಾಹಿತಿಗಳನ್ನು ಕೆಳಕಂಡ ವಿಶಾಲ ಉದ್ಧೇಶಗಳಿಗೆ ಉಪಯೋಗಿಸಬಹುದಾಗಿರುತ್ತದೆ.
- ಪ್ರಸರಣ : ಸಾರ್ವಜನಿಕ ಮತ್ತು ಖಾಸಗಿ ಜಾಲತಾಣಗಳಲ್ಲಿ, ಮೊಬೈಲ್ ಆಪ್ಗಳಲ್ಲಿ ನೈಜ ಬಸ್ ಸಮಯದ ಮಾಹಿತಿಗಳನ್ನು ಸಾರ್ವಜನಿಕರಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ಪ್ರಸರಣ ಮಾಡಬಹುದಾಗಿರುತ್ತದೆ.
- ಸಂಶೋಧನೆ ಮತ್ತು ಅಭಿವೃಧ್ಧಿ : ಸಾರ್ವಜನಿಕರ ಒಟ್ಟಾರೆ ಅನುಕೂಲಕ್ಕಾಗಿ ಹೊಸ ರೀತಿಯಲ್ಲಿ ಮಾಹಿತಿ ಒದಗಿಸುವ ಸೇವೆಗಳನ್ನು ಅಭಿವೃಧ್ಧಿಪಡೆಯಬಹುದಾಗಿರುತ್ತದೆ.
- ಶೈಕ್ಷಣಿಕ ಅಧ್ಯಯನಗಳು : ಸಾರಿಗೆ ತಂತ್ರಜ್ಞರು, ಬೃಹತ್ ದತ್ತಾಂಶ ಪರಿಣಿತರು, ಸಂಶೋಧಕರು ಮುಂತಾದ ಪರಿಣತರು ಮಾಹಿತಿಯನ್ನು ತಮ್ಮ ಪರಿಣಿತಿಯುಳ್ಳ ಕ್ಷೇತ್ರಗಳಲ್ಲಿ ಅಧ್ಯಯನ ಮತ್ತು ಸಲಹೆಗಳಿಗಾಗಿ ದತ್ತಾಂಶ ಮಾಹಿತಿಯನ್ನು ಉಪಯೋಗಿಸಬಹುದಾಗಿದೆ.
- ಕಾರ್ಯತಂತ್ರದ ವಿನ್ಯಾಸ : ಸಾರ್ವಜನಿಕ ನೀತಿಗಳನ್ನು ರೂಪಿಸುವುದಕ್ಕಾಗಿ ಮತ್ತು ನಗರ ಸಾರಿಗೆ ಯೋಜನೆಗಳನ್ನು ರೂಪಿಸುವುದು ಮುಂತಾದ ನೀತಿ, ನಿರೂಪಣೆಯ ಕಾರ್ಯಕ್ಕಾಗಿ ವಿವಿಧ ಸಂಸ್ಥೆಗಳು ಬಳಸಬಹುದಾಗಿದೆ.
- ಕಾರ್ಯಾಚರಣೆ ಯೋಜನೆಗಳಿಗಾಗಿ : ದೈನಂದಿನ ಸಾರಿಗೆ ಮೇಲ್ವಿಚಾರಣೆ ಮತ್ತು ವಿವಿಧ ಪರಿಸ್ಥಿತಿಗಳಲ್ಲಿ ಕಾರ್ಯಾಚರಣೆ ನಿರ್ವಹಣೆಗಾಗಿ ಮಾಹಿತಿಯನ್ನು ಬಳಸಬಹುದಾಗಿದೆ.
- ಸಂಚಾರಕ್ಕೆ ಸಂಬಂಧಿಸಿದ ಕೊಡುಗೆಗಳ ಅಭಿವೃಧ್ಧಿ : ಇತರೆ ವಾಣಿಜ್ಯ ಸೇವೆಗಳನ್ನು ಒದಗಿಸುತ್ತಿರುವ ವ್ಯಕ್ತಿ ಅಥವಾ ಸಂಸ್ಥೆಗಳು ಅವುಗಳ ಜೊತೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಅನುಕೂಲವಾಗುವಂತೆ ದತ್ತಾಂಶ ಮಾಹಿತಿಯನ್ನು ಉಪಯೋಗಿಸಬಹುದಾಗಿದೆ.
- ಇತರೆ ಸೇವೆಗಳ ಅಭಿವೃಧ್ಧಿ : ಸಾಮಾಜಿಕ / ಆರ್ಥಿಕ ಅನುಕೂಲತೆಗಳಿಗಾಗಿ ಸಹ ಈ ಮಾಹಿತಿಗಳನ್ನು ಉಪಯೋಗಿಸಬಹುದಾಗಿದೆ.